SBI PO Admit Card 2025 : ಭಾರತದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸಂಸ್ಥೆಯಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವತಿಯಿಂದ ನಡೆಸಲಾಗುವ ಪ್ರೊಬೇಷನರಿ ಆಫೀಸರ್ (PO) ಪ್ರಿಲಿಮಿನರಿ ಪರೀಕ್ಷೆ ಇನ್ನೂ ಒಂದೇ ವಾರದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಪರೀಕ್ಷೆಗೆ ಹಾಜರಾಗುತ್ತಿರುವ ಅಭ್ಯರ್ಥಿಗಳಿಗೆ ಪ್ರವೇಶಪತ್ರಗಳನ್ನು ಬಿಡುಗಡೆ ಮಾಡಲಾಗಿದೆ.
ಪರೀಕ್ಷೆಯ ವಿವರಗಳು:
- ಪರೀಕ್ಷೆ ಹೆಸರು: SBI PO Prelims 2025
- ಪರೀಕ್ಷೆ ದಿನಾಂಕ: ಆಗಸ್ಟ್ 2 ಮತ್ತು 4, 2025
- ಪರೀಕ್ಷಾ ಮಾದರಿ: ಆನ್ಲೈನ್ ಕಮ್ಯೂಟರ್ ಬೇಸ್ಡ್ ಟೆಸ್ಟ್ (CBT)
- ಅಧಿಕೃತ ವೆಬ್ಸೈಟ್: https://sbi.co.in
ಅಡ್ಮಿಟ್ ಕಾರ್ಡ್ ಡೌನ್ಲೋಡ್ ಹೇಗೆ?
- ಎಸ್ಬಿಐ ಅಧಿಕೃತ ವೆಬ್ಸೈಟ್ ಗೆ ಹೋಗಿ – https://sbi.co.in/web/careers
- “SBI PO Preliminary Exam 2025 Admit Card” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ
- ನಿಮ್ಮ ರೆಜಿಸ್ಟ್ರೇಶನ್ ನಂಬರ್ ಹಾಗೂ ಜನ್ಮದಿನಾಂಕ ಅಥವಾ ಪಾಸ್ವರ್ಡ್ ನಮೂದಿಸಿ
- ಕ್ಯಾಪ್ಚಾ ಎಂಟರ್ ಮಾಡಿ, “Submit” ಬಟನ್ ಕ್ಲಿಕ್ ಮಾಡಿ
- ಪ್ರವೇಶಪತ್ರವನ್ನು ಡೌನ್ಲೋಡ್ ಮಾಡಿ, ಪ್ರಿಂಟ್ಔಟ್ ತೆಗೆದುಕೊಳ್ಳಿ
ಪ್ರವೇಶಪತ್ರದ ಜೊತೆಗೆ ತರಬೇಕಾದ ದಾಖಲೆಗಳು:
- ಪ್ರಿಂಟೆಡ್ ಅಡ್ಮಿಟ್ ಕಾರ್ಡ್
- ಮಾನ್ಯತೆ ಪಡೆದ ಗುರುತಿನ ಚೀಟಿ (ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್ ಮುಂತಾದವು)
ಪರೀಕ್ಷೆಯು ಹೇಗಿರುತ್ತದೆ?
- ಒಟ್ಟು 100 ಪ್ರಶ್ನೆಗಳು
- ವಿಷಯಗಳು: ಇಂಗ್ಲಿಷ್ ಭಾಷೆ, ಕ್ವಾಂಟಿಟೇಟಿವ್ ಅಪ್ರಿಟ್ಯೂಡ್, ರೀಜನಿಂಗ್ ಅಬಿಲಿಟಿ
- ಮೋದಲಿಗೆ ಪ್ರಿಲಿಮಿನರಿ ಪರೀಕ್ಷೆ, ನಂತರ mains ಹಾಗೂ ಇಂಟರ್ವ್ಯೂ ಹಂತ ಇರುತ್ತದೆ
- ಪ್ರತಿ ತಪ್ಪು ಉತ್ತರಕ್ಕೆ 0.25 ಮಾರ್ಕ್ಸ್ ಕಡಿತ
ಅಭ್ಯರ್ಥಿಗಳು ಪ್ರವೇಶಪತ್ರದಲ್ಲಿ ಉಲ್ಲೇಖಿಸಿರುವ ಪರೀಕ್ಷಾ ದಿನಾಂಕ, ಸ್ಥಳ ಮತ್ತು ಸಮಯವನ್ನು ತಪ್ಪದೇ ಪರಿಶೀಲಿಸಿ. ಪ್ರವೇಶಪತ್ರವಿಲ್ಲದೇ ಪರೀಕ್ಷೆಗೆ ಪ್ರವೇಶ ನೀಡಲಾಗುವುದಿಲ್ಲ. ಯಾವುದೇ ತೊಂದರೆಯಿದ್ದರೂ ಕೂಡಾ ಅಧಿಕೃತ ವೆಬ್ಸೈಟ್ ಅಥವಾ ಬ್ಯಾಂಕ್ನ ಸಹಾಯವಾಣಿ ಸಂಪರ್ಕಿಸಲು ಸೂಚಿಸ