Aadhar Card Update 2025 :ನೀವು ಬೇರೊಂದು ನಗರಕ್ಕೆ ಸ್ಥಳಾಂತರಗೊಂಡಿದ್ದರೆ ಅಥವಾ ಹೊಸ ಮನೆಗೆ ಹೋಗಿದ್ದರೆ, ನಿಮ್ಮ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಇತ್ತೀಚಿನ ವಿಳಾಸವನ್ನು ನವೀಕರಿಸುವುದನ್ನ ಮರೆಯಬೇಡಿ. ನಿಮ್ಮ ಬಳಿ ಮಾನ್ಯವಾದ ವಿಳಾಸ ಪುರಾವೆ ಇದ್ದರೆ ಅಥವಾ ವಿಳಾಸ ದೃಢೀಕರಣ ಪತ್ರವನ್ನು (ಸಾಮಾನ್ಯ ದಾಖಲೆಗಳಿಲ್ಲದ ವ್ಯಕ್ತಿಗಳಿಗೆ) ಸ್ವೀಕರಿಸಿದ್ದರೆ, ನೀವು ಅದನ್ನು ಬದಲಾವಣೆ ಮಾಡಲು ಅರ್ಹರಾಗಿರುತ್ತೀರಿ.
ಶೀಘ್ರದಲ್ಲೇ, ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರು, ವಿಳಾಸ, ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯಂತಹ ಪ್ರಮುಖ ವಿವರಗಳನ್ನು ಹೊಸ ಆನ್ ಲೈನ್ ಪ್ರಕ್ರಿಯೆಯ ಮೂಲಕ ನವೀಕರಿಸುವುದು ಇನ್ನಷ್ಟು ಸುಲಭವಾಗಲಿದೆ. ನವೆಂಬರ್ 2025 ರಿಂದ, ಆಧಾರ್‌ನ ಪ್ರಮುಖ ವಿವರಗಳಾದ ಮೊಬೈಲ್ ಸಂಖ್ಯೆ, ವಿಳಾಸ, ಹೆಸರು ಮತ್ತು ಜನ್ಮ ದಿನಾಂಕವನ್ನು ಆನ್ ಲೈನ್ ನಲ್ಲಿ ಪರಿಷ್ಕರಿಸಬಹುದಾಗಿದೆ.
ಈ ಕ್ರಮವು ಅನುಕೂಲವನ್ನು ಸುಧಾರಿಸುವುದು, ದಾಖಲೆಗಳ ಕೆಲಸವನ್ನು ಕಡಿಮೆ ಮಾಡುವುದು ಮತ್ತು PAN, ಪಾಸ್‌ಪೋರ್ಟ್ ಮತ್ತು ಪಡಿತರ ಚೀಟಿಯಂತಹ ಅಸ್ತಿತ್ವದಲ್ಲಿರುವ ಸರ್ಕಾರಿ ಡೇಟಾಬೇಸ್ ಗಳ ಮೂಲಕ ವೇಗವಾಗಿ ದೃಢೀಕರಣವನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಇದರರ್ಥ ನೀವು ಆಧಾರ್ ನಲ್ಲಿ ಹೆಚ್ಚಿನ ನವೀಕರಣಗಳಿಗಾಗಿ ನೀವು ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡುವ ಅಗತ್ಯ ಇಲ್ಲ. ಏಕೆಂದರೆ ಇದು ಬದಲಾವಣೆ ಪ್ರಕ್ರಿಯೆಯನ್ನು ಹಿಂದೆಂದಿಗಿಂತಲೂ ಸುಲಭ ಮತ್ತು ಹೆಚ್ಚು ಬಳಕೆದಾರ ಸ್ನೇಹಿಯನ್ನಾಗಿ ಮಾಡುತ್ತದೆ.
ಆಧಾರ್ ನವೀಕರಣ ಪ್ರಕ್ರಿಯೆಯನ್ನು ಸರಳಗೊಳಿಸಲು UIDAI ಯೋಜನೆ :
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ನವೀಕರಣ ಪ್ರಕ್ರಿಯೆಯನ್ನು ಸರಳಗೊಳಿಸುವುದಕ್ಕೆ ಮುಂದಾಗಿದೆ. ಇದರ ಅಡಿಯಲ್ಲಿ, ಬಳಕೆದಾರರ ಮಾಹಿತಿಯನ್ನು PAN, ಪಾಸ್ ಪೋರ್ಟ್ ಮತ್ತು ರೇಷನ್ ಕಾರ್ಡ್ ನಂತಹ ಅಸ್ತಿತ್ವದಲ್ಲಿ ಇರುವಂತಹ ಸರ್ಕಾರಿ ದಾಖಲೆಗಳನ್ನು ಬಳಸಿಕೊಂಡು ಸ್ವಯಂಚಾಲಿತವಾಗಿ ಪರಿಶೀಲಿಸಲಾಗುತ್ತದೆ. ಇದು ದಾಖಲೆಗಳನ್ನು ಪದೇ ಪದೇ ಅಪ್ ಲೋಡ್ ಮಾಡುವ ಅಗತ್ಯವನ್ನು ನಿವಾರಿಸುತ್ತದೆ.
ಹೆಚ್ಚುವರಿಯಾಗಿ, ಇನ್ನು ಮುಂದೆ ವಿದ್ಯುತ್ ಬಿಲ್ ಗಳಂತಹ ಯುಟಿಲಿಟಿ ಬಿಲ್‌ಗಳನ್ನು ಸಹಾ ಮಾನ್ಯ ವಿಳಾಸ ಪುರಾವೆಯಾಗಿ ಸ್ವೀಕರಿಸಲಾಗುವುದು ಎನ್ನಲಾಗಿದೆ. ಇದು ನವೀಕರಣ ಕಾರ್ಯವಿಧಾನವನ್ನು ಹೆಚ್ಚು ಪರಿಣಾಮಕಾರಿಯನ್ನಾಗಿ ಮಾಡುತ್ತದೆ.

ಶೀಘ್ರದಲ್ಲೇ ಪರಿಷ್ಕೃತ ಮೊಬೈಲ್ ಅಪ್ಲಿಕೇಶನ್ ಒಂದನ್ನು ಬಿಡುಗಡೆ ಆಗುವ ನಿರೀಕ್ಷೆಯೂ ಇದೆ. ಇದು QR ಕೋಡ್ ಕಾರ್ಯ ಚಟುವಟಿಕೆಯೊಂದಿಗೆ ಡಿಜಿಟಲ್ ಆಧಾರ್ ಅನ್ನು ಒದಗಿಸುತ್ತದೆ. ಈ ನವೀಕರಣದೊಂದಿಗೆ, ಭೌತಿಕ ಫೋಟೋ ಕಾಪಿಗಳ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಬಳಕೆದಾರರು ಅಗತ್ಯ ಇದ್ದಾಗ ತಮ್ಮ ಆಧಾರ್ ನ ಸುರಕ್ಷಿತ ಡಿಜಿಟಲ್ ಅಥವಾ ಮಾಸ್ಕ್ ಮಾಡಿದ ಆವೃತ್ತಿಯನ್ನು ಹಂಚಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಇಲ್ಲಿ ನಕಲಿ ಆಧಾರ್ ಚಲಾವಣೆಯ ಅಪಾಯವನ್ನು ಕಡಿಮೆ ಮಾಡುವುದು ಮತ್ತು ಸುರಕ್ಷತೆಯನ್ನು ಹೆಚ್ಚು ಮಾಡುವುದು ಇದರ ಗುರಿಯಾಗಿದೆ.
UIDAI ಉಚಿತ ಸೇವೆಯನ್ನು ನೀಡುತ್ತಿದೆ :
ನೀವು ನಿಮ್ಮ ವಿಳಾಸವನ್ನು ಮಾತ್ರ ಬದಲಾಯಿಸಲು ಬಯಸಿದರೆ, UIDAI ಜೂನ್ 14, 2026 ರವರೆಗೆ myAadhaar ಪೋರ್ಟಲ್ ಮೂಲಕ ಈ ಸೇವೆಯನ್ನು ಉಚಿತವಾಗಿ ನೀಡುತ್ತಿದೆ. ಪ್ರಕ್ರಿಯೆಯನ್ನು ಪೂರ್ಣಗೊಳಿಸಲು, ನಿಮ್ಮ ಆಧಾರ್ ನಿಮ್ಮ ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ, ಏಕೆಂದರೆ ಪರಿಶೀಲನೆಗೆ OTP (ಒಂದು-ಬಾರಿ ಪಾಸ್‌ವರ್ಡ್) ದೃಢೀಕರಣದ ಅಗತ್ಯವಿರುತ್ತದೆ.
ನಿಮ್ಮ ಮೊಬೈಲ್ ಸಂಖ್ಯೆ ಇನ್ನೂ ಲಿಂಕ್ ಆಗದಿದ್ದರೆ, ಮುಂಬರುವ ಆಧಾರ್ ಆಧಾರಿತ ಡಿಜಿಟಲ್ ಸೇವೆಗಳ ಸಂಪೂರ್ಣ ಶ್ರೇಣಿಯನ್ನು ಪಡೆದುಕೊಳ್ಳಲು ಈ ಕೂಡಲೇ ಅದನ್ನು ನವೀಕರಣ ಮಾಡುವುದಕ್ಕೆ ಬಲವಾಗಿ ಶಿಫಾರಸು ಮಾಡಲಾಗಿದೆ.