LIC New Plan 2025:ನೀವು ನಿವೃತ್ತಿಯ ನಂತರದ ಜೀವನದ ಬಗ್ಗೆ ಚಿಂತಿಸುತ್ತಿದ್ದೀರಾ, ವಿಶೇಷವಾಗಿ ಪ್ರತಿ ತಿಂಗಳು ಸಂಬಳ ಬರುವುದು ನಿಂತಾಗ ಖರ್ಚುಗಳನ್ನು ಹೇಗೆ ನಿಭಾಯಿಸುವುದು ಎನ್ನುವ ಆಲೋಚನೆ ಅನೇಕರಿಗೆ ಇರುವ ಸಾಮಾನ್ಯ ಆತಂಕವಾಗಿದೆ. ಆದರೆ, ಈಗ ಈ ಚಿಂತೆ ಬೇಡ! ಭಾರತೀಯ ಜೀವ ವಿಮಾ ನಿಗಮ (LIC) ನಿಮ್ಮ ನಿವೃತ್ತಿ ಜೀವನವನ್ನು ಆರಾಮದಾಯಕ ಮತ್ತು ಆರ್ಥಿಕವಾಗಿ ಸುರಕ್ಷಿತವಾಗಿಸಲು ಒಂದು ಅತ್ಯುತ್ತಮ ಯೋಜನೆಯನ್ನು ಪರಿಚಯಿಸಿದೆ. ಅದೇ ‘ಎಲ್ಐಸಿಯ ಹೊಸ ಜೀವನ ಶಾಂತಿ ಯೋಜನೆ’.
ಈ ಯೋಜನೆಯ ಪ್ರಮುಖ ವೈಶಿಷ್ಟ್ಯವೇನೆಂದರೆ, ನೀವು ಇದರಲ್ಲಿ ಕೇವಲ ಒಂದೇ ಒಂದು ಬಾರಿ ಹಣವನ್ನು ಹೂಡಿಕೆ ಮಾಡಿದರೆ ಸಾಕು. ಇದರ ಬದಲಾಗಿ, ನಿಮಗೆ ನಿಮ್ಮ ಇಡೀ ಜೀವನದುದ್ದಕ್ಕೂ ಪ್ರತಿ ತಿಂಗಳು ಅಥವಾ ಪ್ರತಿ ವರ್ಷ ಪಿಂಚಣಿ ಬರುತ್ತಲೇ ಇರುತ್ತದೆ. ಇದು ನಿಮ್ಮ ನಿವೃತ್ತಿ ಜೀವನಕ್ಕೊಂದು ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಈ ಯೋಜನೆಯ ಮೂಲಕ ನೀವು ವರ್ಷಕ್ಕೆ ₹1.42 ಲಕ್ಷ ಪಿಂಚಣಿ ಪಡೆಯಲು ಹೇಗೆ ಸಾಧ್ಯ ಎನ್ನವುದನ್ನ ಈಗ ತಿಳಿಯೋಣ. ಈ ಯೋಜನೆಯು ನಿಮ್ಮ ಹೂಡಿಕೆ ಮತ್ತು ನಿಮ್ಮ ಆಯ್ಕೆಗಳ ಅನುಗುಣವಾಗಿ ಉತ್ತಮ ಆದಾಯವನ್ನು ನೀಡುತ್ತದೆ.
ಜೀವನ್ ಶಾಂತಿ’ ಯೋಜನೆಯು LIC ಯಿಂದ ಬಂದಿರುವಂತಹ ಒಂದು ಸರಳ ಪಿಂಚಣಿ ಪ್ಲಾನ್. ಇದರಲ್ಲಿ, ನೀವು ಒಂದೇ ಬಾರಿ ಹಣ ಹೂಡಿಕೆ ಮಾಡಿದರೆ ಸಾಕು. ನೀವು ಆಯ್ಕೆ ಮಾಡಿದ ಅವಧಿಯ ನಂತರ (1-12 ವರ್ಷ) ನಿಮಗೆ ಜೀವನಪೂರ್ತಿ ಪಿಂಚಣಿ ಸಿಗುತ್ತದೆ. ಇದು ಶೇರು ಮಾರುಕಟ್ಟೆಗೆ ಸಂಬಂಧಿಸಿಲ್ಲ, ಆದ್ದರಿಂದ ನಿಮ್ಮ ಹೂಡಿಕೆ 100% ಸುರಕ್ಷಿತವಾಗಿರುತ್ತದೆ. ಯಾವುದೇ ನಷ್ಟದ ಭಯವಿಲ್ಲದೇ ನೀವು ನಿಮ್ಮ ನಿವೃತ್ತಿ ಜೀವನ ಆರಾಮವಾಗಿ ಕಳೆಯಲು ಇದೊಂದು ಅತ್ಯುತ್ತಮ ಆಯ್ಕೆಯಾಗಿದೆ.
‘ಜೀವನ್ ಶಾಂತಿ’ ಯೋಜನೆಯಲ್ಲಿ ನೀವು ಆರಿಸಿಕೊಳ್ಳಲು ಎರಡು ಪ್ರಮುಖವಾದ ಆಯ್ಕೆಗಳಿವೆ.
- ಸಿಂಗಲ್ ಲೈಫ್ (ನಿಮಗಾಗಿ ಮಾತ್ರ)
ಈ ಆಯ್ಕೆಯಲ್ಲಿ, ನೀವು ಮಾಡಿದ ಒಂದು ಬಾರಿಯ ಹೂಡಿಕೆಗೆ, ನಿಮಗೆ ನಿಮ್ಮ ಜೀವನದುದ್ದಕ್ಕೂ ಪಿಂಚಣಿ ಸೌಲಭ್ಯವು ಸಿಗುತ್ತದೆ. ನಿಮ್ಮ ಮರಣಾನಂತರ, ನೀವು ಹೂಡಿಕೆ ಮಾಡಿದ ಸಂಪೂರ್ಣ ಮೊತ್ತವನ್ನು ನಿಮ್ಮ ನಾಮಿನಿಯು (ವಾರಸುದಾರರು) ಅದನ್ನು ಪಡೆಯುತ್ತಾರೆ. - ಜಾಯಿಂಟ್ ಲೈಫ್ (ದಂಪತಿಗಳಿಗಾಗಿ)
ಈ ಆಯ್ಕೆಯು ದಂಪತಿಗಳಿಗೆ ಸೂಕ್ತವಾಗಿದ್ದು, ಗಂಡ ಮತ್ತು ಹೆಂಡತಿ ಇಬ್ಬರೂ ಸೇರಿ ಹೂಡಿಕೆಯನ್ನು ಮಾಡಬಹುದಾಗಿದೆ. ಇಲ್ಲಿ ಪಾಲಿಸಿದಾರರಲ್ಲಿ ಒಬ್ಬರು ಮರಣ ಹೊಂದಿದರೆ ಇನ್ನೊಬ್ಬರಿಗೆ ಅವರ ಜೀವಿತಾವಧಿಯವರೆಗೆ ಪಿಂಚಣಿ ಸೌಲಭ್ಯ ಸಿಗುತ್ತದೆ. ಇಬ್ಬರೂ ಮರಣ ಹೊಂದಿದ ನಂತರ, ಹೂಡಿಕೆ ಮಾಡಿದ ಸಂಪೂರ್ಣ ಮೊತ್ತವನ್ನು ನಾಮಿನಿಗೆ ನೀಡಲಾಗುವುದು.

₹10 ಲಕ್ಷ ಹೂಡಿಕೆಗೆ ₹1.42 ಲಕ್ಷ ಪಿಂಚಣಿ ಸಿಗುತ್ತದೆ, ‘ಜೀವನ್ ಶಾಂತಿ’ ಯೋಜನೆಯಲ್ಲಿ ನಿಮ್ಮ ಹೂಡಿಕೆ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನ ತಿಳಿದುಕೊಳ್ಳಲು ಇಲ್ಲೊಂದು ಉದಾಹರಣೆ ನೀಡಲಾಗಿದೆ. ಈಗ ನಿಮ್ಮ ವಯಸ್ಸು 45 ಆಗಿದ್ದು, ನೀವು ‘ಸಿಂಗಲ್ ಲೈಫ್’ ಆಯ್ಕೆಯನ್ನು ಆರಿಸಿಕೊಂಡು ₹10 ಲಕ್ಷ ಹೂಡಿಕೆ ಮಾಡಿದರೆ, ಮತ್ತು 12 ವರ್ಷಗಳ ನಂತರ ಪಿಂಚಣಿ ಪಡೆಯಲು ಬಯಸಿದರೆ (ಅಂದರೆ ನಿಮ್ಮ 57ನೇ ವಯಸ್ಸಿನಲ್ಲಿ), ನಿಮಗೆ ವಾರ್ಷಿಕವಾಗಿ ₹1,42,500 ಪಿಂಚಣಿ ಸಿಗುತ್ತದೆ.
ಇದು ಮಾಸಿಕವಾಗಿ ₹11,400 ಆಗುತ್ತದೆ. ಈ ಪಿಂಚಣಿಯನ್ನು ನೀವು ನಿಮ್ಮ ಜೀವನಪೂರ್ತಿ ಪಡೆಯುವಿರಿ ಮತ್ತು ನಿಮ್ಮ ನಂತರ, ನೀವು ಹೂಡಿಕೆ ಮಾಡಿದ ಮೂಲ ಮೊತ್ತವಾದ ₹10 ಲಕ್ಷವನ್ನು ನಿಮ್ಮ ನಾಮಿನಿಗೆ ಹಸ್ತಾಂತರ ಮಾಡಲಾಗುವುದು. ಒಂದು ವೇಳೆ, ನೀವು ‘ಜಾಯಿಂಟ್ ಲೈಫ್’ ಆಯ್ಕೆಯನ್ನು ಆರಿಸಿಕೊಂಡಿದ್ದರೆ, ಇದೇ ₹10 ಲಕ್ಷ ಹೂಡಿಕೆಗೆ 12 ವರ್ಷಗಳ ನಂತರ ವರ್ಷಕ್ಕೆ ₹1,33,400 (ತಿಂಗಳಿಗೆ ₹10,672) ಪಿಂಚಣಿ ದೊರೆಯುತ್ತದೆ. ಈ ಉದಾಹರಣೆ ನೋಡಿದಾಗ ಈ ಯೋಜನೆ ನಿಮ್ಮ ನಿವೃತ್ತಿ ಜೀವನವನ್ನು ಆರ್ಥಿಕವಾಗಿ ಹೇಗೆ ಭದ್ರಪಡಿಸುತ್ತದೆ ಎನ್ನುವುದು ಸ್ಪಷ್ಟವಾಗುತ್ತದೆ.
ಈ ಯೋಜನೆಗೆ ಯಾರು ಸೇರಬಹುದು ?
ಎಲ್ಐಸಿಯ ‘ಹೊಸ ಜೀವನ ಶಾಂತಿ ಯೋಜನೆ’ಗೆ ಸೇರಲು ವಯಸ್ಸಿನ ಮಿತಿ 30 ರಿಂದ 70 ವರ್ಷಗಳಾಗಿರುತ್ತದೆ. ಈ ಪಾಲಿಸಿಯಲ್ಲಿ ಕನಿಷ್ಠ ₹1.5 ಲಕ್ಷ ಹೂಡಿಕೆ ಮಾಡಬಹುದು. ಈ ಹೂಡಿಕೆಗೆ ನಿಮಗೆ ವರ್ಷಕ್ಕೆ ಸುಮಾರು ₹12,000 ಪಿಂಚಣಿ ದೊರೆಯುತ್ತದೆ. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿರುವುದಿಲ್ಲ. ನೀವು ನಿಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು. ನಿಮ್ಮ ನಿವೃತ್ತಿ ಜೀವನವನ್ನು ಆರ್ಥಿಕ ಚಿಂತೆಗಳಿಲ್ಲದೆ, ನೆಮ್ಮದಿಯಾಗಿ ಕಳೆಯಲು ಈ ಯೋಜನೆ ಒಂದು ಅತ್ಯುತ್ತಮ ಮತ್ತು ಸುರಕ್ಷಿತ ಮಾರ್ಗವಾಗಿದೆ